Gazal (ಗಜಲ್)
Gazal               ಗಜ಼ಲ್ ಏನೇ ಎದುರಾಗಲಿ ನೀ ಬಿಡದಿರು ಛಲ ಕಷ್ಟವೆಷ್ಟೇ ಬರಲಿ ಮರೆಯದಿರು ಛಲ ಸಂಕಷ್ಟವೆದುರಿಸದ ಸಾಧಕರೆಲ್ಲೂ ಇಲ್ಲ ಕಷ್ಟವೆಂದು ಬಿಟ್ಟು ಸರಿಯದಿರು ಛಲ ಹಸಿದ ಹೆಬ್ಬುಲಿಯ ಕಾಲೆಂದೂ ಸೋಲದು ಹಸಿದಂದು ಕಲಿತೆ ಪಾಠ ಕೊಲ್ಲದಿರು ಛಲ ಚಂಚಲನಾಗಿರದೆ ನೀನು ಅಚಲನಾಗಿರು ಸಾಧಿಸು ಸೋಲಿಸುವವರ ಎದಿರು ಛಲ ನಿನ್ನೊಳು ನೀನಿರೆ *ಶ್ರೀಗಿರೀಶ* ನಿನ್ನವನು ಕತ್ತರಿಸೆ ಚಿಗುರುವುದು ಬಿಡದೆ ಬಿದಿರು ಛಲ                       *- ಶ್ರೀಗಿರೀಶ*                  (ಹ ನಾ ಹಾವನೂರು)