ಆದುನಿಕ ವಚನ 'ಕಲಿತನ'
. *ಕಲಿತನ*
ಯಾರು ಏನಾದರೂ ಕರುಣೆ ತೋರದವರು ಒಬ್ಬರು
ಕರುಣೆಯನ್ನೇ ಬಂಡವಾಳ ಮಾಡಿಕೊಂಡವರು ಮತ್ತೊಬ್ಬರು
ಸತ್ಯವನೇ ಹೇಳಿ ಸಾಯುವೆನೆಂಬರು ಕೆಲವರು
ಸತ್ಯವನ್ನೇ ಸುಳ್ಳಾಗಿಸುವವರು ಹಲವರು
ಕತ್ತಲಲಿ ಕಣ್ಣು ಕಾಣದೆ ವಿಶ್ರಮಿಸುವರು ಜನರು
ಕಗ್ಗತ್ತಲ ಬೆಳಕಲ್ಲೇ ಕನ್ನ ಹಾಕಲು ಶ್ರಮಿಸುವರು ಕಳ್ಳರು
ಕಲಿಗಾಲದ ವೈರುದ್ಧ್ಯಗಳ ಕಂಡು ಕುರುಡಾದನು
ಮಾತನಾಡದೆ ಮೂಕನಾದನು ಶ್ರೀಗಿರೀಶ
- ಹ ನಾ ಹಾವನೂರು
Comments
Post a Comment